ಕೃಷಿ ಭೂಮಿ ಉಳಿಸಿ, ರೈತರನ್ನು KIADBಯಿಂದ ಕಾಪಾಡಿ

ರೈತರೇ ದೇಶದ ಬೆನ್ನೆಲುಬು “ರೈತರೇ ಒಗೂಡಿ, ಇಂದು ಒಂದಾಗದಿದ್ದರೆ ನಾಳಿನ ದಿನಗಳು ನಿಮ್ಮದಲ್ಲ.” 

ರೈತರೇ ದೇಶದ ಬೆನ್ನಲುಬು ಎಂದು ಮಾಧ್ಯಮಗಳ ಮುಂದೆ ಬೊಗಳೆ ಬಿಡುವ ರಾಜಕಾರಣಿಗಳು ಮರೆಯಲ್ಲಿ ರೈತರ ಕೃಷಿ ಜಾಮೀನುಗಳನ್ನು ಕೈಗಾರಿಕೆಗಳಿಗೆ ನೀಡುತಿರುವುದು ವಿಪರಿಯಸ.

ತಮ್ಮ ಪಾಡಿಗೆ ತಾವು ತಮ್ಮ ಕಾಯಕದಲ್ಲಿ ತೊಡಗಿರುವ ರೈತರು ಇಂದು ತಾವೇ ಚುನಾಯಿಸಿರುವ ಎಂ.ಎಲ್.ಎ, ಮಾಜಿ ಎಂ.ಎಲ್.ಎ ಹಾಗು ರಾಜಕೀಯ ಪುಡಾರಿಗಳ ಮನೆಗಳಿಗೆ ತಮ್ಮ ಜಮೀನುಗಳನ್ನು ಉಳಿಸಿಕೊಳ್ಳಲು  ಅಲೆಯುವಂತಾಗಿದೆ.

ಕರ್ನಾಟಕ ರಾಜ್ಯ, ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಬೆಳ್ಳೂರ್ ಹೋಬಳಿ, ಕಾಳಿಂಗನಹಳ್ಳಿ ಗ್ರಾಮಪಂಚಾಯತಿಗೆ ಸೇರಿದ ಚೆನ್ನಾಪುರ, ಬೀಚನಹಳ್ಳಿ,  ಹಟ್ನ ಮತ್ತು ಬಿಳಗುಂದ ಗ್ರಾಮಗಳ 1277ಎಕರೆ ಕೃಷಿ ಜಮೀನನ್ನು, ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದಿ ಕಾಯ್ದೆ 1966 ರ ಅಡಿಯಲ್ಲಿ ಕೈಗಾರಿಕಾ ಉದ್ದೇಶಕ್ಕೆ ಬಳಸಲು ದಿನಾಂಕ 14/08/2020 ರಂದು ಆದೇಶ ಸಂಖ್ಯೆ : ಸಿ ಐ 96 ಎಸ್ ಪಿ ಕ್ಯೂ ( ಇ ) 2019 ರಲಿ ಘೋಷಿಸಿದೆ ಇದರಿಂದ ಸುತ್ತಮುತ್ತ ಇರುವ ಹಳ್ಳಿಗಳಿಗೆ ಆಗುವ ಕೆಟ್ಟ ಪರಿಣಾಮಗಳನ್ನು ಯಾವುದು ಲೆಕ್ಕಿಸದೆ A/C ಕ್ಯಾಬಿನ್ನಲ್ಲಿ ಕುಳಿತ ಅಧಿಕಾರಿಗಳು  ಕಣ್ಣು  ಮುಚ್ಚಿ ಈ ಜಾಗವನ್ನು ಕೈಗಾರಿಕೆಗಳಿಗೆ ಗುರುತಿಸಿರುವುದು ಅವರ ಅವಿವಿವೇಕಿತನವನ್ನು ತೋರಿಸುತ್ತದೆ.

ಕೈಗಾರಿಕೆಗೆಂದು ಗುರುತಿಸಿರುವ ಪ್ರದೇಶ ಬಿಳಗುಂದ ಕೆರೆಯ ತಪ್ಪಲಿನಲ್ಲಿದೆ, ಈ ಕೆರೆ ಬಿಳಗುಂದ, ಬೆಟ್ಟದಕೋಟೆ, ಬೈರಸಂದ್ರ, ಗರುಡನಹಳ್ಳಿ ಹಾಗು ಮುಂತಾದ ಹಳ್ಳಿಗಳ ನೂರಾರು ಎಕರೆ ಕೃಷಿ ಜಾಮೀನು , ಸಾವಿರಾರು ಪ್ರಾಣಿ ಪಕ್ಷಿ, ಜಾನುವಾರು ಹಾಗು ಮುಖ್ಯವಾಗಿ ಇಲ್ಲಿನ ಅಂತರ್ಜಲ ವೃದಿಸುವಲ್ಲಿ ಸಹಕಾರಿಯಾಗಿದೆ, ಈ ಕೆರೆ ಕೊಡಿಯಾದರೆ  (ತುಂಬಿದರೆ) ಅಥವಾ ಕೆರೆಯಿಂದ ನೀರು ಬಿಟ್ಟರೆ, ಕಾಲುವೆ ಮೂಲಕ ಇಲ್ಲಿನ ಗದ್ದೆ, ತೋಟಗಳಲ್ಲಿ ಹರಿಯುತ ಶಿoಶಾ ನದಿಯ ಮೂಲಕ ತುಮಕೂರು ಜಿಲ್ಲೆಗೆ ನೀರೊದಗಿಸುವ ಮಾರ್ಕೋನಹಳ್ಳಿ  ಜಲಾಶಯಕ್ಕೆ ಸೇರುತ್ತದೆ. ಇಂತಹ ಜಾಗದಲ್ಲಿ ಕೈಗಾರಿಕೆ ಮಾಡಲು ಸಲಹೆ ನೀಡಿದ ಮಹನೀಯನ ಜ್ಞಾನಕ್ಕೆ ಸಾಸ್ಟ್ಟಂಗ ನಮಸ್ಕಾರ.

ಸರಕಾರ ಈಗ ಕಬಳಿಸಲು ಹೊರಟಿರುವ ಭೂಪ್ರದೇಶದಲ್ಲಿ ಹಲವು ಸಣ್ಣ ಹಾಗು ಅತಿ ಸಣ್ಣ  ರೈತರಿದು ಅವರು ಒಂದಿಂಚು ಕೃಷಿ ಭೂಮಿ ಇಲದೆ ಬೀದಿಗೆ ಬರಬೇಕಾಗುತ್ತದೆ. ಸರಕಾರ ಕೈಗಾರಿಕೆಗಳ ದಳ್ಳಾಳಿಗಳಂತೆ ವರ್ತಿಸುತಿರುವುದು ಶೋಚನೀಯ.   Ø ಈ ಪ್ರದೇಶದಲ್ಲಿ ಕೈಗಾರಿಕೆ ಬಂದರೆ ಇಲ್ಲಿನ ನೀರು, ಗಾಳಿ ಮಲಿನಗೊಳುತ್ತದೆ. ಸಾಲು ಮರದ ತಿಮ್ಮಕ್ಕರನ್ನು ಗೌರವಿಸುವ ಬೊಗಳೆ / ಡೋಂಗಿ ಸರ್ಕಾರ ನಮ್ಮ ರೈತರನ್ನು ಏಕೆ ಗೌರವಿಸುವಿದಿಲ್ಲ. 

ನಮ್ಮ ರೈತರು ಬೆಳೆಯುವ ತೆಂಗು, ಆಡಕೆ, ಮಾವು ಮುಂತಾದ ಬೆಳೆಗಳಿಗೆ ನ್ಯಾಯಯುತ ಬೆಲೆಕೊಡಲು ಆಗದ ಸರ್ಕಾರಗಳು ಇಂತಹ ಹೆಡಿ ಕೃತ್ಯಕ್ಕೆ ಕೈಹಾಕಿರುವುದು ರೈತರೇ ಚುನಾಯಿಸಿ ಕಳಹಿಸಿರುವ ಸರ್ಕಾರಗಳಿಗೆ ನನ್ನ ಧಿಕ್ಕಾರವಿರಲಿ.   Ø ಗಂಗೆಯನ್ನು ಶುದ್ಧಗೊಳಿಸಲು ನೂರಾರು ಕೋಟಿ ಖರ್ಚು ಮಾಡುವ ಸರ್ಕಾರಗಳು, ಶುದ್ದವಿರುವ ಕೆರೆ ಕಟ್ಟೆಗಳನು ಏಕೆ ಮಲಿನಗೊಳಿಸಲು ಮುಂದಾಗಿದೆಯೋ ಗೊತ್ತಿಲ್ಲ.

ಕೃಷಿಯನ್ನೇ ಅದರವಾಗಿ ಬದುಕುತಿರುವ ಹಲವು ಕುಟುಂಬಗಳು ಸರ್ಕಾರ ಕೊಡುವ ಪುಡಿಗಾಸಿಗೆ ತಮ್ಮ ಜಮೀನುಗಳನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. 

ಇದಲ್ಲದೆ 100 ರಿಂದ 200 ಅಡಿಗಳಿಗೆ ನೀರು ಸಿಗುವಂತ ಕೃಷಿಗೆ ಯೋಗ್ಯವಾದ ಜಾಮೀನುಗಳನ್ನು ಯಾವುದೋ ಖಾಸಗಿ ಕೈಗಾರಿಕೆಗಳಿಗೆ ನೀಡುವ ಬದಲು ರೈತರಿಗೆ ಸ್ವಾವಲಂಬನೆಯ ಬದುಕು ಕಟ್ಟಿ ಕೊಡುವಲ್ಲಿ ಸರ್ಕಾರ ಚಿಂತಿಸಬೇಕಾಗಿದೆ.   Ø ಸರಕಾರಿ ಗೋಮಾಳ ಹಾಗು ಕೃಷಿಗೆ ಯೋಗ್ಯವಿರದ ಜಮೀನುಗಳನ್ನು ರೈತರ ಒಪ್ಪಿಗೆ ಪಡೆದು ಕೈಗಾರಿಕೆಗಳಿಗೆ ಬಳಸಲು ನಮ್ಮ ಯಾವುದೇ ತಕರಾರಿಲ್ಲ, ಆದರೆ ಕೃಷಿಗೆ ಪೂರಕವಾದ ಜಮೀನನ್ನು ಕೈಗಾರಿಕೆಗೆ ಬಳಸುವುದು ಸರಿಯಲ್ಲ. 

ರೈತರ ಹಿತರಕ್ಷಣೆಗೆ ಯೋಜನೆಗಳನ್ನು ರೂಪಿಸಲು ಆಗದ ಹೊಣಗೇಡಿ ಸರ್ಕಾರಗಳು ಕೈಗಾರಿಕೆಗಳ ದಲ್ಲಾಳಿಗಳಂತೆ ವರ್ತಿಸುತಿರುವುದು ವಿಪರಿಯಾಸ. 

ಕೈಗಾರಿಕೆಗೆಂದು ಗುರುತಿಸಿರುವ ಪ್ರದೇಶದಲ್ಲಿ ಸಮೃದ್ಧವಾಗಿ ಒಳ್ಳೆಯ ಮಳೆಯಾಗುತ್ತಿದೆ, ಈ ಪ್ರದೇಶದಲ್ಲಿ ತೆಂಗು ಮಾವು ಅಡಿಕೆ, ಬತ್ತ, ರಾಗಿ, ಹಾಗು ಇತರೆ ಬೆಳೆಗಳನ್ನು ಬೆಳೆಯುತ್ತಿದ್ದೇವೆ, ಕೃಷಿಗೆ ಯೋಗ್ಯವಾದ ಭೂಮಿಯನ್ನು ಕೈಗಾರಿಕೆಗೆ ಬಳಸಲು ಹೊರಟಿರುವುದು ಶೋಚನೀಯ. 

ರಾಜ್ಯದ ಗಡಿಯನ್ನು ರಕ್ಷಿಸದ ಹಾಗು ಸರ್ಕಾರಿ ಜಮೀನುಗಳನ್ನು ಒತುವರಿಯಾಗದಂತೆ ತಡೆಯಲ್ಲೂ ತಾಕತ್ತಿಲದ ಭ್ರಷ್ಟ, ನಾಲಾಯಕ್ ಅಧಿಕಾರಿಗಳು ನಮ್ಮ ತಾಲೂಕಿನಲ್ಲಿ ಇರುವ ಕೃಷಿಗೆ ಯೋಗ್ಯವಲ್ಲದ ಜಮೀನುಗಳನ್ನು ಕೈಗಾರಿಕೆಗಳಿಗೆ ಗುರುತಿಸುವುದನ್ನು ಬಿಟ್ಟು, ಕೃಷಿ ಯೋಗ್ಯ ಜಮೀನನ್ನು ಗುರುತಿಸಿರುವುದು ನೋಡಿದರೆ ಇವರೆಲ್ಲ ಹೊಟ್ಟೆಗೆ ಅನ್ನ ತಿನ್ನಲು ಯೋಗ್ಯವಲ್ಲದ ಜನರೆಂದು ಗೋಚರವಾಗುತ್ತದೆ.  

ಈಗಾಗಲೇ ಊರಿನ ಮೂಲಭೂತ ಸೌಕರ್ಯಗಳಾದ ಶಾಲೆ, ಆಸ್ಪತ್ರೆಗಳಿಗೆ ರೈತರ ಜಮೀನುಗಳನವು ನೀಡಿದು, ಕೈಗಾರಿಕೆಗೆ ಜಾಮೀನು ನೀಡಿ ನಾವುಗಳು ಎಲ್ಲಿಗೆ ಹೋಗಬೇಕು.  

ಇಡೀ ವಿಶ್ವಕ್ಕೆ ಕೊರೋನಾ ಮಹಾಮಾರಿ ಬಂದು, ವಿಶ್ವದ ಎಲ್ಲಾ ದೇಶದ ಕೈಗಾರಿಕೆಗಳು ಸ್ತಬ್ದವಾದರೂ ರೈತ ಮಾತ್ರ ಎಂದಿನಂತೆ ತನ್ನ  ಕಾಯಕವನ್ನು ಬಿಟ್ಟು ಕೈಕಟ್ಟಿ ಕೂರಲಿಲ್ಲ.

ರೈತರನ್ನು ಮಾಲೀಕರನಾಗಿರಲು ಬಿಡಿ, ಅವರನ್ನು ಗುಲಾಮರನ್ನಾಗಿ ಮಾಡ ಬೇಡಿ. 

ರೈತರಿಗೆ ನೋಟೀಸ್ ನೀಡಿ ಆಕ್ಷೇಪಣೆ ಇದ್ದಲಿ 30 ದಿನಗಳಲ್ಲಿ  ಖುದ್ದಾಗಿ ವಿಶೇಷ ಭೂಸ್ವಾಧೀನಾಧಿಕಾರಿಗೆ ಅಂಚೆ ಮೂಲಕ ಉತ್ತರಿಸುವಂತೆ ತಾಕೀತು ಮಾಡಿದು, ಅಂಚೆವೆಚ್ಚವನ್ನು ಯಾರು ಭರಿಸುತ್ತಾರೆ, ಇದರ ಬದಲು ನೋಟೀಸ್ ನೀಡಿದ ಅದಿಕಾರಿಯನ್ನೇಕೆ ಖುದ್ದಾಗಿ ಆಕ್ಷೇಪಣೆ ಸ್ವೀಕರಿಸಲು ಆ ಊರುಗಳಿಗೆ ಕಳುಹಿಸಬಾರದು, ರೈತರಿಗೇನು ಮಾಡಲು ಕೆಲಸವಿಲವ. ನಮ್ಮ ರೈತರೇಕೆ 95 ಕಿ.ಮೀ ಬಂದು ನಿಮ್ಮನು ಕಾಣಬೇಕು, ರೈತರ ಜಾಮೀನು ಬೇಡಲು ಬಂದಿರುವುದು ನೀವು ನೀವೇಕೆ ನಿಮ್ಮ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸಬಾರದು. 

ನಮ್ಮ ತಾಲೂಕಿನ ಶಕ್ತಿ ಕ್ಷೇತ್ರವಾದ ಶ್ರೀ ಆದಿ ಚುಂಚನಗಿರಿಯು ಸರ್ಕಾರ ಕೈಗಾರಿಕೆಗೆಂದು ಗುರುತಿಸಿರುವ ಪ್ರದೇಶದ ಕೂಗಳತೆ ದೂರದಲ್ಲಿದು, ಅಂದು ಶ್ರೀಕ್ಷೇತ್ರದ ಬೆಳವಣಿಗೆಗೆ ದೇಣಿಗೆ ನೀಡುತ್ತಿದ ಹಲವು ಊರುಗಳು ನಶಿಸಿ ಹೋಗುವ ಭಯ ಎದುರಾಗಿದೆ.ಅಂದು ಶ್ರೀ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ ಈ ರೈತರ ಜೀವ ಹಾಗು ಜೀವನವನ್ನು ಉಳಿಸುವ ಮಹತ್ತರವಾದ ಜವಾಬ್ದಾರಿ ಹಾಗು ಹೊಣೆಗಾರಿಕೆ ಶ್ರೀ ಕ್ಷೇತ್ರದಾಗಿದೆ.

ರೈತರ ಜಮೀನಿನಲ್ಲಿ ಕೈಗಾರಿಕೆ ತೆರೆಯುವ ಕೈಗಾರಿಕೆಗಳು, ರೈತರ ಜಮೀನನ್ನು ಖರೀದಿಸದೆ, ಅವರಿಗೆ ತಮ್ಮ ಕೈಗಾರಿಕೆಯಲ್ಲಿ ‘ಡಿ’ ಗ್ರೇಡ ನೌಕರಿ ನೀಡುವ ಬದಲು ಅವರನ್ನು ತಮ್ಮ ಕೈಗಾರಿಕೆಯ ಪಾಲುದಾರರನಾಗಿ ಮಾಡಿಕೊಂಡು ಅವರಿಗೂ ಕೂಡ ತಾವು ಗಳಿಸುವ ಲಾಭದಲ್ಲಿ ಪಾಲು ಏಕೆ ನೀಡಬಾರದು?  

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡದಿರಲ್ಲೂ ಹೋರಾಟಮಾಡುವ ನಮ್ಮ ಜಿಲ್ಲೆಯ ರೈತರು ಹಾಗು ರೈತ ಹೋರಾಟಗಾರರು ಇಂದು ತಮ್ಮದೇ ಜಿಲ್ಲೆಯಲ್ಲಿ ಆಗುತ್ತಿರುವ  ಅನ್ಯಾಯದ ಬಗ್ಗೆ ಏಕೆ ಧ್ವನಿಯೆತುತ್ತಿಲ್ಲ?   Ø ನಮ್ಮ ರೈತ ಹೋರಾಟಗಾರರ, ರೈತರ ಪರ ಕಾಳಜಿ ಇರುವ ಸಂಘಗಟನೆಗಳ ಗಮನಕ್ಕೆ ಈ ವಿಚಾರ ಬಾರದಿರುವುದು ಆಶ್ಚರ್ಯಕರವಾಗಿ  ತೋರಿಸುತ್ತಿದೆ. ಪೋ ನಂಜುಂಡಸ್ವಾಮಿ.ಎಂ.ಡಿ, ಕೆ.ಎಸ್.ಪುಟ್ಟಣಯ್ಯ ರವರಂತ ಹೋರಾಟಗಾರರನ್ನು ನೀಡಿದ ಜಿಲ್ಲೆಯಲ್ಲಿ ಅಂತ ಹೋರಾಟಗಾರರ ಕೊರತೆಯಾಗಿದೆಯಾ ಎಂದು ನನ್ನ ಮನಸಿನಲ್ಲಿ ಒಂದು ಪ್ರಶ್ನೆ ಹಾಗೇ ಉಳಿದುಬಿಟ್ಟಿದು, ಇದಕ್ಕೆ ನಮ್ಮ ರೈತರು ಯಾವ ರೀತಿ ಉತ್ತರಿಸುತ್ತಾರೋ ಕಾದು ನೋಡಬೇಕಿದೆ. 

ಕೊರೋನಾ, ಡ್ರಗ್ಸ್ ದಂಧೆ ಸುದ್ದಿಗಳಲ್ಲಿ ಹೆಚ್ಚು ಬ್ಯುಸಿಯಾಗಿರುವ ಮಾಧ್ಯಮ ಮಿತ್ರರು, ರೈತರಿಗೆ ಆಗುತ್ತಿರುವ ಅನ್ಯಾಯದ ಬಗೆಯು ಕೂಡ ಗಮನಿಸಬೇಕಾಗಿ ನನ್ನ ಕಳಕಳಿಯ ವಿನಂತಿ. ಈಗಾದರು ನಮ್ಮ ರೈತರು ಸ್ವಹಿತಾಸಕ್ತಿ ಹಾಗು ರಾಜಕೀಯ ಭಿನಾಭಿಪ್ರಾಯ ಮರೆತು ಎಲ್ಲರ ಒಳಿತಿಗಾಗಿ ಒಗೂಡಬೇಕಿದೆ.

“ಜೈ ಜವಾನ್, ಜೈ ಕಿಸಾನ್.” ಮಹೇಶ್ ಕುಮಾರ್ ಬೆಟ್ಟದಕೋಟೆ

IMG-20201006-WA00012.jpgIMG_20200915_0703022.pngIMG-20201005-WA00502.jpg


ಕರ್ನಾಟಕ ರಾಜ್ಯ, ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಬೆಳ್ಳೂರ್ ಹೋಬಳಿ, ಕಾಳಿಂಗನಹಳ್ಳಿ ಗ್ರಾಮಪಂಚಾಯತಿಗೆ ಸೇರಿದ ಚೆನ್ನಾಪುರ, ಬೀಚನಹಳ್ಳಿ,  ಹಟ್ನ ಮತ್ತು ಬಿಳಗುಂದ ಗ್ರಾಮಗಳ KIADB ಭೂಸ್ವಾಧೀನ ಪ್ರಕ್ರಿಯೆ ವಿರೋಧಿ ವೇದಿಕೆ    Contact the author of the petition

Sign this Petition

By signing, I authorize ಕರ್ನಾಟಕ ರಾಜ್ಯ, ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಬೆಳ್ಳೂರ್ ಹೋಬಳಿ, ಕಾಳಿಂಗನಹಳ್ಳಿ ಗ್ರಾಮಪಂಚಾಯತಿಗೆ ಸೇರಿದ ಚೆನ್ನಾಪುರ, ಬೀಚನಹಳ್ಳಿ,  ಹಟ್ನ ಮತ್ತು ಬಿಳಗುಂದ ಗ್ರಾಮಗಳ KIADB ಭೂಸ್ವಾಧೀನ ಪ್ರಕ್ರಿಯೆ ವಿರೋಧಿ ವೇದಿಕೆ to hand over the information I provide on this form to those who have power on this issue.

We will not display your email address publicly online.

We will not display your email address publicly online.







Paid advertising

We will advertise this petition to 3000 people.

Learn more...