Cutdown Madhvacharya name from Nadageethe -ನಾಡಗೀತೆಯಿಂದ ಮಧ್ವಾಚಾರ್ಯರ ಹೆಸರನ್ನು ತೆಗೆಯಬೇಕೆಂದು ಆಗ್ರಹ.

Comments

#201

ಶಂಕರ, ರಾಮಾನುಜರರನ್ನು ಮದ್ವರೊಂದಿಗೆ ಹೋಲಿಕೆ ಸರಿಯಲ್ಲ, ಮತಾಂಧ, ಮತಾಂತರಿಯಾಗಿ ಸಮಾಜದ ಸ್ವಾಸ್ಥ್ಯ ಹಾಳುಮಾಡಿದ್ದಾರೆ

namma ulthooru (Bangalore, 2021-05-26)

#205

ಮಧ್ಶ್ವರ ಹೆಸರು ಅವಶ್ಯಕತೆ ಇಲ್ಲ

SVCDixit Sri Rameswara krupa (Davangere, 2021-05-26)

#207

ಅದ್ಭುತ ಕೆಲಸಕ್ಕೆ ನಮ್ಮ ಸಹಕಾರ ಇದ್ದೇ ಇದೆ

S.v. Karanth (Kasaragod, 2021-05-26)

#208

I Strongly Believe original Writing Should be Intact and Not Changed or Anything Added which is Heinous Act

Prashanth Patil (Bangalore, 2021-05-26)

#224

Shankara nindana

Anantha Adiga (Sowkur, Gulvady, Kundapura, 2021-05-27)

#231

Primarily Kvmpu not written Madva's name

Mr Sreedharan (Mysuru , 2021-05-27)

#237

I stand with Rastrakavi Kuvempu.

Sucheth Ram K S (Bengaluru, 2021-05-28)

#239

ಕುವೆಂಪು ಅವರ ಕೃತಿಗಳನ್ನು ನಾನು ಒಬ್ಬ ಸಾಹಿತ್ಯ ಪ್ರೇಮಿಯಾಗಿ ಇಷ್ಟ ಪಡುತ್ತೇನೆ. ಆದರೆ ವೇದಾಂತದ ವಿಷಯವಾಗಿ ಹೇಳುವುದಾದರೆ ಅವರು ದ್ವೈತಿಗಳಾದ ನಮಗೆ ಮಾತ್ರ ಅಲ್ಲ, ಅದ್ವೈತ ಮತಾನುಯಾಯಿಗಳಿಗೂ ಒಬ್ಬ bench mark ಅನ್ನುವ ಗುರುವೇನೂ ಅಲ್ಲ. ಅವರು ನಾಡಗೀತೆಯನ್ನು ರಚಿಸುವಾಗ ಮಧ್ವಾಚಾರ್ಯರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟರೋ ಅಥವಾ ಅವರ ಹೆಸರು ಇವರಿಗೆ ಸ್ಫುರಣೆಯೇ ಆಗಲಿಲ್ಲವೋ ಅವರಿಗೆ ಮಾತ್ರ ಗೊತ್ತು. ಮಧ್ವಾಚಾರ್ಯರ ಬಗ್ಗೆ ಇದ್ದ ಅವರ ಅಭಿಪ್ರಾಯ ಏನಿದ್ದರೂ ಅದು ಅವರ ವ್ಯಕ್ತಿಗತವಾದ ಅನುಭವದ್ದು.

ಕುವೆಂಪು ಅವರು ವೇದಾಂತದತ್ತ ಒಲವಿದ್ದವರು. ಆದರೆ ಅದು ಅವರ ಕೃಷಿಕ್ಷೇತ್ರವೆಂದು ಹೇಳಲಾಗದು. ಅದೂ ಅಲ್ಲದೆ ಅದ್ವೈತ ವೇದಾಂತವನ್ನು ಓದಬಯಸುವರಾರೂ ಇವರ ಕೃತಿಗಳನ್ನು ಅಧ್ಯಯನ ಗ್ರಂಥಗಳಾಗಿ ಪರಿಗಣಿಸಿರುವುದು ಕಾಣುವುದಿಲ್ಲ.
ಅವರು ದ್ವೈತಿಯಾಗಿ ಇರಬೇಕಿತ್ತು ಅನ್ನುವ ಅಭಿಪ್ರಾಯ ಕೂಡ ನನಗಿಲ್ಲ. ಕುವೆಂಪು ಕುವೆಂಪು ಆಗಿಯೆ ಇರುವುದು ನನ್ನ ಇಷ್ಟ. ಇದು ನನ್ನ ವೈಯುಕ್ತಿಕ ನೆಲೆ.

ಹೀಗೆ ಇಷ್ಟವೇ ಇಲ್ಲದೆ ಮಧ್ವಾಚಾರ್ಯರ ಹೆಸರನ್ನು ತೆಗೆದುಕೊಂಡು ನೀವು ಹಿಂಸೆ ಅನುಭವಿಸುವುದು ಬೇಡ. ತೆಗೆದು ಹಾಕುವುದೇ ಕ್ಷೇಮ.

ಮಧ್ವಾಚಾರ್ಯರ ಹೆಸರನ್ನು ಹಟಮಾಡಿ ಸೇರಿಸುವ ಅಗತ್ಯವೂ ಇದ್ದಿಲ್ಲ. ಈಗ ತೆಗೆದು ಪದ್ಯವನ್ನು ಸರಿಪಡಿಸಿಕೊಂಡಲ್ಲಿ ಮಧ್ವರ ವ್ಯಕ್ತಿತ್ವಕ್ಕೆ ಕುಂದೂ ಬಾರದು. ಮಧ್ವರ ಹೆಸರು ಇಲ್ಲದೆ ಹೋದರೂ, ನಾಡಗೀತೆಯು ಕನ್ನಡಿಗನಾಗಿ ನನಗೆ ಮಾನ್ಯವೇ ಆಗಿದೆ.

ರಘುನಂದನ ಶರ್ಮ (ನಾಗಮಲೆ ಪುದುಕೋಟೆ, ತ.ನಾ, 2021-05-28)

#242

Madhwa is anti human anti equality person , neither a Vedic scholar nor has true knowledge. He's a black mark in the traditional history of India

Akshay Samagani (Bangalore, 2021-05-29)

#248

I didn't accept twisting word

NAGESHA N (KANAKAPURA, 2021-06-06)

#249

I'm singing

Nagaraj B naik (Koppa, 2021-06-18)

#251

ಯಾರೇ ಸಮಾಜ ಒಡೆಯುವ ಕೆಲಸ ಮಾಡಿದರು ಅದು ದೊಡ್ಡ ಅಪರಾಧ . ಈ ಪಿಟಿಷನ್ ಅಭಿಯಾನ ಸರಿಯಾಗಿದೆ.
ಶ್ರೀ ಶ್ರೀ ಶಂಕರಾಚಾರ್ಯರ ಸಿದ್ದಾಂತ ಬಹಳ ಸುಂದರ ಮತ್ತು ಸುಲಭ ಇದು ಎಲ್ಲರಿಗು ಸಿಗಲಿ ಮತ್ತು ಸಮಾಜದಲ್ಲಿ ಸಮಾನತೆ ಬರಲಿ ಎಂದು ಆಶಯ .


ಶ್ರೀ ಶ್ರೀ ಶಂಕರಾಚಾರ್ಯರ ಸಿದ್ದಾಂತವನ್ನು ಪಾಲಿಸುವಲ್ಲಿ ಅನೇಕ ಶಂಕರ ಪೀಠಗಳು ವಿಫಲವಾಗಿವೆ , ಇದಕ್ಕೆ ಕಾರಣ ಅವರ ವಯಕ್ತಿಕ ಸ್ವಾರ್ಥ ಅಂತ ಕಾಣುತ್ತದೆ.

ಉದಾಹರಣೆಗೆ - ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಶ್ರೀ ವಿವೇಕಾನಂದ ಸ್ವಾಮಿಗಳು ಶ್ರೀ ಶ್ರೀ ಶಂಕರಾಚಾರ್ಯರ ಅನುಯಾಯಿಗಳು . ಅವರ ಪರಂಪರೆ ಮತ್ತು ಅವರ ಆಶ್ರಮ ನೋಡಿದರೆ ನಮಗೆ ತಿಳಿಯುತ್ತದೆ ಅಲ್ಲಿ ಯಾವುದೇ ಭೇದ ಮತ್ತು ತಾರತಮ್ಯ ಇಲ್ಲ ಅಂತ. ಅವರು ಸ್ತ್ರೀ ,ಶೂದ್ರರಿಗೂ ಸನ್ಯಾಸ ಕೊಡುತ್ತಾರೆ ಮತ್ತು ವೇದ , ಉಪನಿಷತ್ತು , ಶಂಕರಾಚಾರ್ಯರ ಭಾಷ್ಯ ಹೇಳಿಕೊಡುತ್ತಾರೆ.
ಇದರಿಂದ ಅಲ್ಲಿ ಸ್ತ್ರೀ ,ಶೂದ್ರರು ಸನ್ಯಾಸಿಗಳಾಗಿ ಸಾಧನೆ ಮಾಡುತ್ತ ಸಮಾಜ ಸೇವೆ ಮಾಡುತ್ತಾ ಇದ್ದಾರೆ .ಅಲ್ಲಿ ಸ್ತ್ರೀ ,ಶೂದ್ರರು ವೇದ .ಉಪನಿಷತ್ತು , ಶಂಕರಾಚಾರ್ಯರ ಭಾಷ್ಯ ಓದಿ ಸಾಧನೆ ಮಾಡುತ್ತಾ ಇದ್ದಾರೆ.


"ಅದೇ ಶ್ರೀ ಶ್ರೀ ಶಂಕರಾಚಾರ್ಯರ ಅನುಯಾಯಿಗಳಾದ ಅನೇಕ ಪೀಠಗಳು ಇದರಲ್ಲಿ ವಿಫಲವಾಗಿವೆ. ಉದಾಹರಣೆಗೆ ಶೃಂಗೇರಿ ಪೀಠದಲ್ಲಿ ಹಿಂದಿನ ಪರಂಪರೆಯಿಂದ ಈಗಿನವರೆಗೂ ಕೇವಲ ಒಂದು ವರ್ಗದ ಜನ ಮಾತ್ರ ಸನ್ಯಾಸಿ ಆಗಿದ್ದಾರೆ . ಸ್ತ್ರೀ ಮತ್ತು ಶೂದ್ರರಿಗೆ ಯಾಕೆ ಇದುವರೆಗೂ ಒಂದು ಬಾರಿಯಾದರೂ ಸನ್ಯಾಸ ಕೊಟ್ಟಿಲ್ಲ?
ಸ್ತ್ರೀ ಮತ್ತು ಶೂದ್ರರಿಗೆ ಯಾಕೆ ಶೃಂಗೇರಿ ಶಾರದಾಂಬ ಪೂಜೆಗೆ ಅವಕಾಶ ಇಲ್ಲ ?
ಶಾರದಾಂಬ ಕೇವಲ ಒಂದು ವರ್ಗದ ಜನಕ್ಕೆ ಮಾತ್ರ ತಾಯಿ ಅಲ್ಲ. ಎಲ್ಲರಿಗು ತಾಯಿ.
ಸ್ತ್ರೀ ಮತ್ತು ಶೂದ್ರರಿಗೆ ಯಾಕೆ ಶೃಂಗೇರಿ ಶಾರದಾಂಬ ಪೂಜೆಗೆ , ಪ್ರಸಾದ ಮಾಡುವ ಸೇವೆಗೆ , ವೇದ ಓದಲು ಅವಕಾಶಯಿಲ್ಲ ?
ಶೂದ್ರರಿಗೆ ಯಾಕೆ ಶೃಂಗೇರಿಯಲ್ಲಿ ಅಡುಗೆ ಸೇವೆಯಲ್ಲಿ , ವೇದ ಪಾಠಗಳಲ್ಲಿ ಮತ್ತು ಆಡಳಿತದಲ್ಲಿ ಅವಕಾಶಯಿಲ್ಲ?



ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಶ್ರೀ ವಿವೇಕಾನಂದ ಸ್ವಾಮಿಗಳ ಪರಂಪರೆಯವರು ಮಾಡುತ್ತಾರೆ ಇವರು (ಶೃಂಗೇರಿ ಯವರು ) ಯಾಕೆ ಮಾಡಲ್ಲ ?
ಎಲ್ಲಿದೆ ಸಮಾನತೆ ? ಶ್ರೀ ಶ್ರೀ ಶಂಕರಾಚಾರ್ಯರ ಎಲ್ಲರು ಒಂದೇ ಅನ್ನುವ ತತ್ವ ಯಾಕೆ ಪಾಲಿಸುತ್ತಿಲ್ಲ ? "


ಮಧ್ವಾಚಾರ್ಯರ ಹೆಸರು ನಾಡ ಗೀತೆಯಿಂದ ಕೈಬಿಟ್ಟ ನಂತರ ಸಮಾಜದಲ್ಲಿ ಸಮಾನತೆ ಬರಬಹುದೇ? ಖಂಡಿತಾ ಇಲ್ಲ .

ಶ್ರೀ ಶ್ರೀ ಶಂಕರಾಚಾರ್ಯರ ಅನುಯಾಯಿಗಳಾದ ನಾವು ಅವರ ಸಿದ್ದಂತ ಎಲ್ಲರು ಒಂದೇ , ಯಾರು ಮೇಲು ಅಲ್ಲ ಮತ್ತು ಕೀಳು ಅಲ್ಲ ಅಂತ ಸಾಮಾನ್ಯ ಜನರಿಗೆ ಮುಟ್ಟಿಸಲೇಬೇಕು ಇದು ನಮ್ಮ ಮುಖ್ಯ ಕರ್ತವ್ಯ .
ಇದಕ್ಕೆ ನಾವು ಎಲ್ಲಾ ಶ್ರೀ ಶ್ರೀ ಶಂಕರಾಚಾರ್ಯರ ಪೀಠಗಳ್ಲಲಿ ಮುಂದಿನ ಪೀಠಾಧಿಪತಿಗಳಾಗಿ ಬೇರೆ ವರ್ಗದವರನ್ನು, ಸ್ತ್ರೀ ಮತ್ತು ಶೂದ್ರರನ್ನು ಬರುವಂತೆ ಮಾಡಬೇಕು.
ಶೃಂಗೇರಿಶಾರದಾಂಬ ಕೇವಲ ಒಂದು ವರ್ಗಕ್ಕೆ ಮಾತ್ರ ಸೇರಿದ್ದಲ್ಲ , ಬೇರೆ ವರ್ಗದವರು,ಸ್ತ್ರೀ ಮತ್ತು ಶೂದ್ರರು ಅಲ್ಲಿ ಪೂಜೆ ಮಾಡುವ ಸೇವೇ , ವೇದ ಓದಲು ಅನುಕೂಲ ,ಪ್ರಸಾದ ಮಾಡುವ ಸೇವೆ , ಅಡುಗೆ ಮಾಡುವ ಸೇವೆಗೆ ಅವಕಾಶ ಕೊಟ್ಟಾಗ ಮಾತ್ರ ನಾವು ಶ್ರೀ ಶ್ರೀ ಶಂಕರಾಚಾರ್ಯರ ಎಲ್ಲರು ಒಂದೇ ಎನ್ನುವ ಸಿದ್ಧಾಂತ ವನ್ನು ಪಾಲಿಸಿದಂತಾಗುವುದು.

ಜೈ ಶಂಕರ

Yajurvedi Shankarappa Pavagada (Pavagada, 2022-06-01)

#255

ಆತ್ಮೀಯ ವಿಪ್ರ ಬಾಂಧವರಿಗೆ ನಮಸ್ಕಾರಗಳು,

ಅದ್ವೈತ ಮಹಾ ಮಂಡಲದ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಶ್ರೀ ಮಧ್ವಾಚಾರ್ಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ವಾಟ್ಸಪ್ ನಲ್ಲಿ ಹರಿಯ ಬಿಟ್ಟಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ , ಇದು ನಿಜಕ್ಕೂ ಖಂಡನೀಯ

ಈ ವಿಷಯದಲ್ಲಿ ಅನಗತ್ಯವಾಗಿ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರಭಾರತಿ ಸನ್ನಿಧಾನಂಗಳವರ ಹೆಸರನ್ನು ಎಳೆದು ತಂದು ಅವರ ಹೆಸರನ್ನು ದುರುಪಯೋಗಗೊಳಿಸಲಾಗಿದೆ , ಶೃಂಗೇರಿ ಶ್ರೀ ಗಳು ಎಂದಿಗೂ ಸಮಸ್ತ ಸನಾತನ ಸಂಸ್ಕೃತಿ ಮತ್ತು ಸರ್ವ ಜನರ ಒಳಿತನ್ನೇ ಬಯಸುವವರಾಗಿದ್ದರೆ ಹೊರತು ಈ ರೀತಿಯ ಸಮಾಜದ ಸ್ವಾಸ್ತ್ಯ ಕದಡುವಂಥ ಕಾರ್ಯಕ್ಕೆ ಎಂದಿಗೂ ಬೆಂಬಲ ನೀಡಲಾರರು. ಇದು ಶೃಂಗೇರಿಯ ಮಠಕ್ಕೆ ಸಂಬಂಧವಿಲ್ಲ ಎಂಬ ಸ್ಪಷ್ಟನೆ ಈಗಾಗಲೇ ನೀಡಿದ್ದಾರೆ.

ಎಲ್ಲ ಆಚಾರ್ಯರು ಸನಾತನ ಧರ್ಮ ಶಕ್ತಿಯುತವಾಗಿ ಬೇರೂರಲು ಕಾರಣಕರ್ತರಾಗಿದ್ದಾರೆ. ದೈವ ಸಾಕ್ಷತ್ಕಾರದ ಹಾದಿಯಲ್ಲಿ ಕರ್ಮ ಮಾರ್ಗ, ಭಕ್ತಿ ಮಾರ್ಗ, ಜ್ಞಾನ ಮಾರ್ಗ ಇವುಗಳು ಇವೆ. ಆಚಾರ್ಯರು ಈ ಮಾರ್ಗಗಳಿಗೆ ವಿವಿಧ ರೀತಿಯಲ್ಲಿ ಪ್ರಾಶಸ್ತ್ಯ ನೀಡಿರುತ್ತಾರೆ. ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿ ಮಾರ್ಗವೇ ಸೋಪಾನ ಎಂದು ಪ್ರತಿಪಾದಿಸಿದ ಮಹಾನುಭಾವರು ಶ್ರೀ ಮಧ್ವಾಚಾರ್ಯರು. 37 ಗ್ರಂಥಗಳನ್ನು ರಚಿಸಿ (ಸರ್ವಮೂಲ) ತತ್ತ್ವವನ್ನು ಪ್ರತಿಪಾದಿಸಿದರು. ಇವರ ತತ್ವವಾದವೆ ಮುಂದೆ ಭಕ್ತಿಪಂಥಕ್ಕೆ ಮತ್ತು ಹರಿದಾಸ ಪಂಥಕ್ಕೆ ಎಡೆ ಮಾಡಿಕೊಟ್ಟಿತು. ಭಗವದ್ಗೀಗೀತೆಗೆ ಬರೆದ ಭಾಷ್ಯದಲ್ಲಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಹೀಗೆ ಸಾರಿದ್ದಾರೆ: “ಜಾತಿಪದ್ಧತಿ ಎನ್ನುವುದು ದೇಹಕ್ಕಿಂತ ಹೆಚ್ಚು ಸ್ವಭಾವಕ್ಕೆ ಸಂಬಂಧಿಸಿದ್ದು. ಹುಟ್ಟಿನಿಂದ ಒಬ್ಬನು ಯಾವ ಜಾತಿ ಎನ್ನುವುದು ಮುಖ್ಯವಲ್ಲ. ಅವನ ಸ್ವಭಾವವೇ ಅವನ ಜಾತಿಯ ನಿರ್ಣಾಯಕ. ಮೂಲತಃ ಜಾತಿಪದ್ಧತಿ ಎನ್ನುವುದು ಮನುಷ್ಯನ ಸ್ವಭಾವದ ವಿಭಾಗ.ಜಾತಿ-ಮತ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಹದಿಮೂರನೆಯ ಶತಕದ ಸಂಪ್ರದಾಯಬದ್ಧ ಭಾರತದಲ್ಲಿ ಬದುಕಿದ್ದ ಆಚಾರ್ಯರು ಇಂಥ ಪ್ರಗತಿಶೀಲ ವಿಚಾರಗಳನ್ನು ಮಂಡಿಸಿದ್ದರು. ಇಂತಹ ಮಹಾನುಭಾವರ ಬಗ್ಗೆ ದುರುಕ್ತಿಗಳನ್ನಾಡಿದರೆ ಶ್ರೇಯಸ್ಸು ಆಗುವುದಿಲ್ಲ

ಇಂತಹ ಸಮಾಜದ ಸ್ವಾಸ್ತ್ಯ ಕದಡಿಸುವ ಹಾಗು ವಿವಿಧ ವ್ಯವಿಧ್ಯಮಯ ಸಂಪ್ರದಾಯವನ್ನು ಪಾಲಿಸುತ್ತ ಬಂದಿರುವ ಬಂಧು ಬಾಂಧವರ ನಡುವೆ ದ್ವೇಷ ಬಿತ್ತುವ ಕುಕೃತ್ಯವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತೀವ್ರವಾಗಿ ಖಂಡಿಸುತ್ತಿದೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)
ಬೆಂಗಳೂರು.

ಹರಿ ಪ್ರಸಾದ ಭಟ್ (ಮಂಗಳೂರು, 2022-06-02)

#257

Name of our Guru is not meant to be taken by one and all. So, go ahead and remove it. Also, at the first place, including was surely wrong. It was against poet's wish.
Only deserving get to utter my master's name.

Srihari Kurudi (Bengaluru, 2022-06-04)



Paid advertising

We will advertise this petition to 3000 people.

Learn more...